ಹೌದು ಪೊಲೀಸರು ಇನ್ಮುಂದೆ ಈ ಕಾರ್ಡ ಮಾಡಿಸದಿದ್ದಲ್ಲಿ ಪೊಲೀಸ್ ಕ್ಯಾಂಟೀನ್ಗಳಲ್ಲಿ ಸಾಮಗ್ರಿಗಳನ್ನು ಖರೀದಿಸಲಾಗುವುದಿಲ್ಲ.
ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್ (KPKB) ಅನ್ನು 2006 ರಲ್ಲಿ ಗೃಹ ಸಚಿವಾಲಯವು ಭಾರತದಾದ್ಯಂತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF ಗಳು), ಕೇಂದ್ರ ಪೊಲೀಸ್ ಸಂಸ್ಥೆಗಳು (CPO ಗಳು) ಮತ್ತು ರಾಜ್ಯ ಪೊಲೀಸ್ ಪಡೆಗಳ ಸಿಬ್ಬಂದಿಯನ್ನು ಬೆಂಬಲಿಸುವ ಕಲ್ಯಾಣ ಉಪಕ್ರಮವಾಗಿ ಸ್ಥಾಪಿಸಿತು. KPKB ಸೇವೆಯಲ್ಲಿರುವ ಮತ್ತು ನಿವೃತ್ತ ಸಿಬ್ಬಂದಿ ಮತ್ತು ಅವರ ಕುಟುಂಬಗಳು ಸೇರಿದಂತೆ 35 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಆರ್ಥಿಕ ಪ್ರಯೋಜನಗಳನ್ನು ಖಾತ್ರಿಪಡಿಸುವ ಮೂಲಕ ರಿಯಾಯಿತಿ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಗ್ರಾಹಕ ವಸ್ತುಗಳನ್ನು ಒದಗಿಸಲು ಸಮರ್ಪಿತವಾಗಿದೆ. ಈ ಯೋಜನೆಯು ದೇಶಾದ್ಯಂತ 1,800+ ಅಂಗಸಂಸ್ಥೆ ಭಂಡಾರ್ಗಳು (ಚಿಲ್ಲರೆ ಮಾರಾಟ ಮಳಿಗೆಗಳು) ಹಾಗೂ 119 ಮಾಸ್ಟರ್ ಭಂಡಾರ್ಗಳು (ಗೋದಾಮುಗಳು) ಹೊಂದಿದೆ.
ಯಾರ್ಯಾರು ಈ ಯೋಜನೆಗೆ ಅರ್ಹರು:ಕೇಂದ್ರ ಪೊಲೀಸ್ ಕಲ್ಯಾಣ್ ಭಂಡಾರ್ (KPKB) ಭಾರತದಾದ್ಯಂತ 35 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹೆಮ್ಮೆಯಿಂದ ಸೇವೆ ಸಲ್ಲಿಸುತ್ತದೆ, ಅವುಗಳೆಂದರೆ:ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸಿಬ್ಬಂದಿ – ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFಗಳು), ಕೇಂದ್ರ ಪೊಲೀಸ್ ಸಂಸ್ಥೆಗಳು (CPOಗಳು) ಮತ್ತು ರಾಜ್ಯ ಪೊಲೀಸ್ ಪಡೆಗಳು ಹಾಗು ಕುಟುಂಬದ ಸದಸ್ಯರುಗಳು ಈ ಪ್ರಯೋಜನಗಳನ್ನು ಪಡೆಯಲು ಅರ್ಹರು.ಈ ಯೋಜನೆಯು ಈಗಾಗಲೇ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಮತ್ತು ಕುಟುಂಬಗಳ ಕ್ಷೇಮಾಭಿವೃದ್ಧಿ ದೃಷ್ಠಿಯಿಂದ ದೈನಂದಿನ ಅಗತ್ಯ ಸಾಮಗ್ರಿಗಳನ್ನು ಕಡಿಮೆ ದರದಲ್ಲಿ ದೊರಕಿಸುವ ಉದ್ಧೇಶದಿಂದ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಅದರಂತೆ ಎಲ್ಲಾ ಜಿಲ್ಲಾ ಪೊಲೀಸ್ ಕೇಂದ್ರಗಳಲ್ಲಿರುವ ಪೊಲೀಸ್ ಕ್ಯಾಂಟೀನ್ಗಳಲ್ಲಿ ಪೊಲೀಸರು ತಮಗೆ ಬೇಕಾದ ದಿನನಿತ್ಯದ ಅವಶ್ಯಕ ಸಾಮಗ್ರಿಗಳನ್ನು ಆರ್ಮಿ, ನೇವಿ ಹಾಗೂ ಏರ್ಫೋರ್ಸ ಕ್ಯಾಂಟೀನ್ಗಳAತೆ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದರಾದರೂ ಕರ್ತವ್ಯದ ಮೇಲೆ ಬೇರೆ ಜಿಲ್ಲೆ/ರಾಜ್ಯಗಳಿಗೆ ಹೋದಾಗ ಅಲ್ಲಿ ಸಾಮಗ್ರಿಗಳನ್ನು ಖರೀದಿಸಲು ಅನಾನುಕೂಲವಾಗುತ್ತಿತ್ತು, ಕೋರ್ ಸಿಸ್ಟಮ್ ಇಲ್ಲದ ಕಾರಣ ಈ ಸೂಕ್ಷ್ಮತೆಯನ್ನರಿತ ಕೇಂದ್ರ ಗೃಹ ಸಚಿವಾಲಯವು ಆನ್ಲೈನ್ ಪೋರ್ಟಲ್ ಅಭಿವೃದ್ಧಿ ಪಡಿಸಿದ್ದು, ಈ ಯೋಜನೆಯ ಮೂಲಕ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿಯು ದೇಶದ ಯಾವುದೇ ಪೊಲೀಸ್ ಕ್ಯಾಂಟೀನ್ ಅಥವಾ ಬಿ.ಎಸ್.ಎಫ್/ಸಿ.ಆರ್.ಪಿ.ಎಫ್. ಕ್ಯಾಂಟೀನಿನಲ್ಲಾದರೂ ದಿನನಿತ್ಯದ ಸಾಮಗ್ರಿಗಳು ಹಾಗೂ ಎಲೆಕ್ಟಿçಕ್ ಸಾಮಗ್ರಿಗಳಾದ ರೆಫ್ರಿಜರೇಟರ್, ವಾಷಿಂಗ್ ಮಷಿನ್, ಟಿ.ವಿ., ಕೂಲರ್, ಎ.ಸಿ, ಹಾಗೂ ಮುಂತಾದ ಸಾಮಗ್ರಿಗಳನ್ನು ತಮಗೆ ಹತ್ತಿರವಿರುವ ಕ್ಯಾಂಟೀನ್ಗಳಿAದ ಖರೀದಿಸಬಹುದಾಗಿದೆ.ಈ ಯೋಜನೆಯನ್ನು ಪಡೆಯಲು ಎಲ್ಲಾ ಪೊಲೀಸ್ ಕ್ಯಾಂಟೀನ್ ಫಲಾನುಭವಿಗಳು ಹೊಸದಾದ ಕ್ಯಾಂಟೀನ್ ಕಾರ್ಡಗಳನ್ನು ಮಾಡಿಸಬೇಕಾಗಿದ್ದು, ಈ ವೆಬ್ಸೈಟ್ (https://kpkbmha.in) ಗೆ ಭೇಟಿ ನೀಡಿ ಕನ್ಸುಮರ್ ರಜಿಸ್ಟೆçÃಷನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಲಾಗಿನ್ ಮಾಡಿಕೊಳ್ಳುವ ಮುಖಾಂತರ ಹೊಸದಾದ ಕ್ಯಾಂಟೀನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳುಬಹುದಾಗಿದೆ.
ಹೊಸ ಕ್ಯಾಂಟೀನ್ ಕಾರ್ಡ ಮಾಡಿಸಲು ಬೇಕಾಗುವ ದಾಖಲೆಗಳು:
- ಪಾನ್ ಕಾರ್ಡನಲ್ಲಿರುವಂತೆ ಹೆಸರು ಮತ್ತು ತಂದೆಯ ಹೆಸರು.
- ಪಾನ್ ನಂಬರ್
- ಮೊಬೈಲ್ ನಂಬರ (ಒ.ಟಿ.ಪಿ.ಯ ಸಲುವಾಗಿ)
- ಇ-ಮೇಲ್ ಐಡಿ (ಒ.ಟಿ.ಪಿ.ಯ ಸಲುವಾಗಿ)
- ಜನ್ಮ ದಿನಾಂಕ
- ಕೆ.ಜಿ.ಐ.ಡಿ. ನಂಬರ (ಸೇವೆಯಲ್ಲಿರುವವರಿಗೆ)
- ಪಿ.ಪಿ.ಒ. ನಂಬರ(ನಿವೃತ್ತರಿಗೆ)
- ಅವಲಂಭಿತರ ಹೆಸರು ಮತ್ತು ಆಧಾರ ಸಂಖ್ಯೆ
- ಪಾಸಪೋರ್ಟ ಸೈಜ್ ಫೋಟೊ (ಜೆಪಿಇಜಿ/ಜೆಪಿಜಿ ಫಾರ್ಮೆಟ್ 140ಕೆಬಿ ಯ ಒಳಗಡೆ ಇರಬೇಕು)
- ಐಡಿ ಕಾರ್ಡ (ಸೇವೆಯಲ್ಲಿರುವವರಿಗೆ)(ಎರಡು ಬದಿ, ಪಿಡಿಎಫ್ ಫಾರ್ಮೆಟ್ 250ಕೆಬಿ ಯ ಒಳಗಡೆ ಇರಬೇಕು)
- ಪೆನ್ಷೆನ್ ಪೇಪರ್(ನಿವೃತ್ತರಿಗೆ)( ಎರಡು ಬದಿ, ಪಿಡಿಎಫ್ ಫಾರ್ಮೆಟ್ 250ಕೆಬಿ ಯ ಒಳಗಡೆ ಇರಬೇಕು)
ಕನ್ಸುಮರ್ ರಜಿಸ್ಟ್ರೇಷನ್ ವಿಧಾನ:
- PERSONAL INFO

- ಮೊದಲು ನಿಮ್ಮ ಮೊಬೈಲ್/ಕಂಪ್ಯೂಟರ್ನ ಗೂಗಲ್ನಲ್ಲಿ https://kpkbmha.in ಅನ್ನುವ ವೆಬ್ಸೈಟ್ಗೆ ಭೇಟಿ ನೀಡಿ.
- NEW CONSUMER REGISTRATION ಮೇಲೆ ಕ್ಲಿಕ್ ಮಾಡಿದಾಗ ಮೇಲೆ ತೋರಿಸಿರುವಂತೆ ಪುಟ ತೆರೆಯುತ್ತದೆ.
- ಅಲ್ಲಿ ನಿಮ್ಮ ಪಾನ್ ಕಾರ್ಡನಲ್ಲಿರುವಂತೆ ನಿಮ್ಮ ಹೆಸರು, ತಂದೆಯ ಹೆಸರು, ಮೊಬೈಲ್ ನಂ, ಇ-ಮೇಲ್ ಐಡಿ, ಜನ್ಮ ದಿನಾಂಕ, ಪಾನ್ ನಂಬರ್, ಸರ್ವೀಸ್ ಸ್ಟೇಟಸ್ ಇವುಗಳನ್ನು ತುಂಬಿ.
- ಸರ್ವೀಸ್ ಸ್ಟೇಟಸ್ ತುಂಬುವಾಗ ಸರ್ವೀಸ್ನಲ್ಲಿ ಇರುವವರು SERVING ಅನ್ನು ಕ್ಲಿಕ್ ಮಾಡಿ.
- ರಿಟೈರ್ಡ ಆದವರು RETIRED ಎಂದು ಕ್ಲಿಕ್ ಮಾಡಿ.
- REGIMENTAL ID ಅನ್ನುವ ಕಾಲಂ ನಲ್ಲಿ ಸರ್ವೀಸ್ನಲ್ಲಿ ಇರುವವರು ನಿಮ್ಮ KGID ನಂಬರನ್ನು ತುಂಬಿ.
- ರಿಟೈರ್ಡ ಆದವರು PPO NUMBER ತುಂಬಿರಿ.
NEXT ಎಂಬಲ್ಲಿ ಕ್ಲಿಕ್ ಮಾಡಿ.
- VERIFY CONTACTS.
ಈ ಹಂತದಲ್ಲಿ ಮೊಬೈಲ್ಗೆ ಬಂದಿರುವ OTP ಯನ್ನು ತುಂಬಿ, VERIFY ಮೇಲೆ ಕ್ಲಿಕ್ ಮಾಡಿ.
ನಂತರ ENTER PASSWORD ಮತ್ತು CONFIRM PASSWORD ಎನ್ನುವ ಜಾಗದಲ್ಲಿ ಒಂದೇ ತರಹದ PASSWORD ಅನ್ನು ಸೆಟ್ ಮಾಡಿ ತುಂಬಿರಿ.
NEXT ಎಂಬಲ್ಲಿ ಕ್ಲಿಕ್ ಮಾಡಿ.
- ADDITIONAL INFO

ಈ ಪುಟದಲ್ಲಿ ನಿಮ್ಮ GENDER ಅನ್ನು ಆಯ್ಕೆ ಮಾಡಿ.
RANK/DESIGNATION ಕಾಲಂನಲ್ಲಿ ಈ ಕೆಳಕಂಡಂತೆ ತುಂಬಿರಿ.
PC’s to HC’s OTHER RANK(RK 03)
ASI’s to PI’s SUBORDINATE OFFICER(RK 02)
DySP’S to ABOVE OFFICERS RANK(RK 01)
ನಂತರ Service/Branch ಎಂಬಲ್ಲಿ Karnataka State Police (FR0019) ಅನ್ನು ಆಯ್ಕೆ ಮಾಡಿ.
ನಂತರ ನಿಮ್ಮ ವಿಳಾಸ ಮತ್ತು ಪಿನ್ ಕೋಡ್ ಅನ್ನು ತುಂಬಿ.
ನಂತರ PROFILE PHOTO ಕಾಲಂನಲ್ಲಿ ನಿಮ್ಮ PASSPORT SIZE PHOTO ಸ್ಕ್ಯಾನ್ ಮಾಡಿ ಹಾಕುವುದು.
(JPEG FORMAT ನಲ್ಲಿ 140ಕೆಬಿ ಗಳಿಗಿಂತ ಕಡಿಮೆ ಇರಬೇಕು).
CHOSE FILE ಕಾಲಂನಲ್ಲಿ
- ಸೇವೆಯಲ್ಲಿರುವವರು ನಿಮ್ಮ ಪೊಲೀಸ್ ID ಕಾರ್ಡನ ಮುಂಭಾಗ ಮತ್ತು ಹಿಂಭಾಗದ ಪೋಟೊಗಳ PDF ಅನ್ನು ಹಾಕಿ. (PDF FORMAT 250ಕೆಬಿ ಗಳಿಗಿಂತ ಕಡಿಮೆ ಇರಬೇಕು).
- ರಿಟೈರ್ಡ ಆದವರು ನಿಮ್ಮ PENSION PAPER ನ ಎರಡು ಬದಿಯ PDF ಅನ್ನು ಹಾಕಿ. (PDF FORMAT 250ಕೆಬಿ ಗಳಿಗಿಂತ ಕಡಿಮೆ ಇರಬೇಕು).
ನಂತರ ARE YOU DEPENDENT OF A SERVICE MEMBER? ಎಂಬಲ್ಲಿ NO ಎಂದು ಸೆಲೆಕ್ಟ್ ಮಾಡಿ. (ಒಂದು ವೇಳೆ SERVING MEMBER ಅಥವಾ RETIRED MEMBER ನಿಧನ ಹೊಂದಿದಲ್ಲಿ YES ಎಂದು ಸೆಲೆಕ್ಟ್ ಮಾಡಿ)
ARE YOU HAVE DEPENDENT FAMILY MEMBER? ಎನ್ನುವ ಕಾಲಂನಲ್ಲಿ YES ಎಂದು ಕ್ಲಿಕ್ ಮಾಡಿ.
NUMBER OF DEPENDENTS ಎಂಬಲ್ಲಿ ಮನೆಯ ಸದಸ್ಯರ ಸಂಖ್ಯೆಯನ್ನು ಆಯ್ಕೆ ಮಾಡಿ, ನಂತರ ಮನೆಯ ಸದಸ್ಯರ ಹೆಸರು ಹಾಗೂ ಆಧಾರ್ ನಂಬರ ಅನ್ನು ಟೈಪ್ ಮಾಡಿ.
SUBMIT ಎಂಬಲ್ಲಿ ಕ್ಲಿಕ್ ಮಾಡಿ
- PREVIEW & SUBMIT
ನೀವು ತುಂಬಿರುವ ದತ್ತಾಂಶಗಳು ಈ ಪುಟದಲ್ಲಿ ಒಮ್ಮೆ ನೋಡಿ. ಎಲ್ಲವೂ ಸರಿಯಾಗಿದೆ ಎಂದು ಖಾತ್ರಿ ಪಡಿಸಿದ ನಂತರ SUBMIT ಪದದ ಮೇಲೆ ಕ್ಲಿಕ್ ಮಾಡಿ.

ಈ ಹಂತದಲ್ಲಿ ನಿಮಗೆ ಮೇಲ್ಕಂಡ CON ರಿಂದ ಸ್ಟಾರ್ಟ ಆಗುವ ಒಂದು ನಂಬರ ಜನರೇಟ್ ಆಗುತ್ತದೆ. ಆ CONxxxxxx ನಂ. ಅನ್ನು ನಿಮ್ಮ ಹತ್ತಿರದ ಪೊಲೀಸ್ ಕ್ಯಾಂಟೀನಿಗೆ ವಿನಿಮಯ ಮಾಡಿಕೊಳ್ಳಿರಿ.

ಆನಂತರ ನಿಮ್ಮ ಕ್ಯಾಂಟೀನ್ ಹಾಗೂ ಮಾಸ್ಟರ ಕ್ಯಾಂಟೀನಿನವರು ನಿಮ್ಮ ಕಾರ್ಡನ್ನು ಅಪ್ರೂವಲ್ ಮಾಡಿದ ಮೇಲೆ ಮತ್ತದೆ ವೆಬ್ಸೈಟ್ (https://kpkbmha.in) ಗೆ ಹೋಗಿ User Name ಎಂಬಲ್ಲಿ ನಿಮ್ಮ ಮೊಬೈಲ್ ನಂ. ಅಥವಾ ಇ-ಮೇಲ್ ಐಡಿ ಹಾಕಿ Password ಎಂಬಲ್ಲಿ ನೀವು ಮೊದಲೇ ಸೆಟ್ ಮಾಡಿದ Password ಹಾಕಿ ಲಾಗಿನ್ ಆಗಿ ಈ ರೀತಿಯಲ್ಲಿ ಐಡಿ ಕಾರ್ಡನ್ನು(Soft Copy) ಡೌನ್ಲೋಡ್ ಮಾಡಿಕೊಳ್ಳಿರಿ.